ಬುಧವಾರ, ಜನವರಿ 11, 2012

ನೀನೆಲ್ಲಿ ...


ಮುಸ್ಸಂಜೆ ಹೊತ್ತಲ್ಲಿ ...
ತಂಪಾದ ಟೈಮ್ ಅಲ್ಲಿ..
ತಂಗಾಳಿ ತಂಪಲ್ಲಿ ...
ಹಕ್ಕಿಗಳ ಕಲರವದಲ್ಲಿ...
ಸೂರ್ಯ ಮುಳುಗೋ ಹೊತ್ತಲ್ಲಿ ...
ಕತ್ತಲೆಯು ಮೂಡುವ ಕ್ಷಣದಲ್ಲಿ ..
ಮಂಕಾದ ಬೆಳಕಲ್ಲಿ ...
ಮಂಜಾದ ಕಣ್ಣಲ್ಲಿ..
ನೀ ಕಂಡೆ ಓ ನನ್ನ ಚಲುವೇ..
ನೀನೆಲ್ಲಿ , ಈ ಸಂಜೆ ನಮಗಿಲ್ಲಿ..
ಎಲ್ಲಿರುವೆ ಓ ನನ್ನ ಒಲವೇ..
ನಿನಗಾಗಿ ನಾ ಕಾದಿರುವೆ..
ಓ ನನ್ನ ಚಲುವೇ ಓ ನನ್ನ ಒಲವೇ..

-ಚೈತನ್ಯ ಮಂದಾಲ.
 

ಮನದಾಳದ ಬಯಕೆ...


ಮುಂಜಾನೆಯ ಮೊಬ್ಬುಗತ್ತಲ ಸಮಯ..,
ಬೆಸೆದ ಕೈಗಳು..
ತಾಳಕ್ಕೆ ತಕ್ಕ0ತೆ ಜೋಡಿ ನಡಿಗೆ..,
ಮುಂಗುರುಳ ಮರೆಯಲ್ಲಿ ಬೀರುವ
ಕಳ್ಳ ನೋಟ..
ಚಿಗುರು ಮೀಸೆಯ ಮರೆಯಲ್ಲೆ
ನಕ್ಕ ನಗು..,
ಏನೊ ಹೇಳಬೇಕೆಂಬ ಹೆಬ್ಬಯಕೆ..
ಚಡಪಡಿಸುವ ಮನಗಳು..
ಈ ಚಡಪಡಿಕೆಯನ್ನು ನೀವೇನಾದರೂ
ಅನ್ನಿ..,
ನಾ ಪ್ರೀತಿಯಂತಲೇ ಕರೆಯುತ್ತೇನೆ...

ನನ್ನ ಹುಡುಗಿ ...


£ÀUÀÄ ªÉÆUÀzÀ N £À£Àß ºÀ¸À£ÀÄäTAiÉÄÃ,
PÉAzÁªÀgÉAiÀÄ PÀtÚ £ÉÆlzÀ N £À£Àß ¸ÀTAiÉÄÃ,
£À£Àß PÀ£À¹£À ¯ÉÆÃPÀzÀ ªÀiÁzÀPÀ PÀ¸ÀÆÛjAiÉÄÃ,
¤Ã¼ÀPÉñÀzÀ ¤ªÀÄÄ9R ªÀÄ£ÀzÀ ¤ªÀÄÄ9TAiÉÄÃ.
                          
ºÉÆ£ÀߣÀÄrAiÀÄ ºÉÆ£Áß½£À £À£Àß ºÉÆ£ÀßV½AiÉÄÃ.
ºÀ¹gÀÄ ¹ÃgÉAiÀÄ vÉÆlÖ  ªÀįɣÁr£À ªÀÄÄzÀÄÝ ªÀÄUÀ¼ÉÃ,
PÉA¥ÀÄ ©A¢AiÀÄ ¤lÖ PÀgÀÄ£ÁqÀ £À£ÀßPÉÆªÀįÉAiÉÄÃ,
ªÀÄ£ÀzÀ £ÀÄrAiÀÄ ªÀÄÄPÀÛ ªÀÄ£ÀzÀ ªÀÄAzÁQ¤AiÉÄÃ,

£À«®Æj£À £ÁlåzÀ N £À£Àß £À¯ÉäAiÀÄ ºÉtÄÚ£À«¯ÉÃ,
PÉÆÃV¯É PÀAoÀ¢ PÀÆUÀĪÀ N £À£Àß ©½ PÉÆÃV¯ÉAiÉÄÃ,
±ÀAPÀÄ Q«AiÀİ PÀvÉAiÀÄ PÉüÀĪÀ N £À£Àß PÀ«vÉAiÉÄÃ,
NgÉ £ÉÆÃl¢ ºÀÈzÀAiÀÄ MqÉAiÀÄĪÀ N £À£Àß ºÀÄrVAiÉÄÃ...
   ¦æÃw¬ÄAzÀ..
_ "ZÉÊvÀ£Àå ªÀÄAzÁ®"           

ಅರಳಿದ ಹೂವಿಗೆ


ಯಾರು ದಿಕ್ಕು ?
ಮೊಗ್ಗು ಹೂವಾದ,
ಬಾಡಿ ಬಯಲಿಗೆ
ಬಿದ್ದ ಕ್ಷಣಗಳ ಕಂಡವರೆಷ್ಟು?

ಮುಂಜಾವಿನಲ್ಲಿ ಚುಂಬಿಸಿದ
ಕಿರಣಗಳು,
ಹೊತ್ತೇರುವ ಮುನ್ನ ಮುದ್ದಿಸಿದ
ದುಂಬಿಗಳ,
ಮರೆತು

ತಾ ಸಾಕ್ಷಿಯಾಗಬೇಕಿದೆ
ಯಾರದೋ ಪ್ರೀತಿಗೆ,
ಮೂಡಿಯೇರಬೇಕಿದೆ
ಇನ್ನ್ಯಾರದೋ ಸಿಂಗಾರಕ್ಕೆ

ಹಾರದಿ ಬಂದಿಯಾಗಿ
ಹಂಚಿಕೊಳ್ಳಬೇಕಿದೆ
ನಕ್ಕವರ ನಗು,
ಅತ್ತವರ ಅಳು

ತನ್ನ ಕೀಳುವ ಕೈಗಳಿಗೆ
ಹಿಂಸಿಸದೆ,ಹೆಸರ ಕೇಳದೆ
ಇನ್ನಷ್ಟು ಹತ್ತಿರವಾಗಿ
ಹಾರೈಸುವ ಹೂವೆ

ನೀ ಕಾಲನಾಜ್ಞೆಗೆ
ಬಾಗಿ ಬಸವಳಿದು
ಕುಸಿದು ಬಿಳುವಾಗ
ನಿನ್ನ್ಯಾರು ಕೇಳಿದರೆ??
ಮುಸ್ಸಂಜೆಯಲಿ ಮರೆಯಾದ ಕಿರಣಗಳೇ ?
ಮರಳಿ ,ಬಂದ ಹಾದಿ ಹಿಡಿದ ದುಂಬಿಗಳೇ?
ಪ್ರೀತಿಗಾಗಿ ಮುತ್ತಿಟ್ಟವರೆ ?
ಸಿಂಗಾರಕ್ಕಾಗಿ ಮೈದಡವಿದವರೆ?
ನಿನ್ನ ಬಂದಿಸಿ ಬಳಸಿಕೊಂಡವರೆ ?
ಹೇಳೇ????

-ಚೈತನ್ಯ ಮಂದಾಲ 

ಎತ್ತ ಸಾಗುವುದೀ ಪಯಣ


ಪ್ರೀತಿ ಎಂಬ ಬಳ್ಳಿಯಲ್ಲಿ
ಯಾರು ಇರುವರು ಜೊತೆಯಲ್ಲಿ
ಹೂವ ಫಲವ ಪಡೆಯುವಲ್ಲಿ
ಎತ್ತ ಸಾಗುವುದೀ ಪಯಣ .
ಸ್ವಪ್ನವೆಂಬ ಚಿತ್ರದಲ್ಲಿ
ನಿನ್ನ ಸೌಮ್ಯ ಮುಖದಲ್ಲಿ
ಮುತ್ತು ರಶ್ಮಿಯಂತೆ ಬೆಳಕ ಚೆಲ್ಲಿ
ಎತ್ತ ಸಾಗುವುದೀ ಪಯಣ .
ಚಿತ್ತ ಒಮ್ಮೆ ನಕ್ಕಿತಲ್ಲಿ
ನಿನ್ನ ಜ್ಞಾನಶಕ್ತಿಗೆ ಸೋತಿತಲ್ಲಿ
ಗಂದ ತುಂಬಿತು ಸುತ್ತಲಲ್ಲಿ
ಎತ್ತ ಸಾಗುವುದೀ ಪಯಣ ..
ಆತ್ಮವೆಂಬ ಸತ್ವದಲ್ಲಿ
ಭಗವಂತನ ರೂಪದಲ್ಲಿ
ಕಂಡಿತಲ್ಲಿ ಪ್ರೇರಣೆ ಸುಲಭದಲ್ಲಿ
ಎತ್ತ ಸಾಗುವುದೀ ಪಯಣ .
ನೀನು ಯಾರು ಎಂಬ ಅರ್ಥದಲ್ಲಿ
ಚಿಂತಿಸಿಲ್ಲ ಹೃದಯದಲ್ಲಿ
ಸುಗಮವಾಗಿ ಅಂತ್ಯದಲ್ಲಿ
ಎತ್ತ ಸಾಗುವುದೀ ಪಯಣ.


ಎಲ್ಲಿರುವೆ ...


ನನ್ನ  ಮನಸಿನ  ಮಾತು ...
ಕೇಳುವ ಮನಸೇ ನೀ ಎಲ್ಲಿರುವೆ?
ಬೇಗ ನೀ  ಬಳಿ  ಬರಬಾರದೇ...
ನಿನಗಾಗಿಯೇ ನಾ ಕಾದು  ಕುಳಿತಿರುವೇನು ....
ನಮ್ಮ  ಭಾವನೆಗಳ  ಬಾಂಧವ್ಯದ
ಬೆಸುಗೆಗೆ  ಈ  ಮನಸು..
ನಿನ್ನನ್ನೇ  ಅರಸುತಿದೆ ನನ್ನ ಈ ಮನ ..
ಎದುರಿದ್ದರು  ಅಡಗಿರುವಂತಿದೆ,
ಬಳಿ  ಬಂದು , ಕೈ  ಹಿಡಿದು ,
ಬೆಚ್ಚಗಿನ ನಿನ್ನ  ಎದೆಗೊರಗಿಸಿಕೋ ಎಂದು ...
ತಡವರಿಸುತಿದೆ ನನ್ನ ಈ ಮನ ...
ಮನದ  ಮಾತು  ಬಿಚ್ಚಿಡಳು ನಿನಗಾಗಿ..
ಹೂ  ದುಂಬಿಯಂತೆ ಕಾದಿರುವೆ ..
ಭಾವನೆಗಳ ದೀಪದ  ಬತ್ತಿ ..
ನನ್ನ ಮನಸೆಂಬ ಹೂ ಬಾಡುವ ಮುನ್ನ ....
ನನ್ನ  ಕಣ್ಣೆದುರು ನೀ ಬರಬಾರದೆ...

-ರಂಜು ಶ್ರೀ

ಶುಕ್ರವಾರ, ಜನವರಿ 6, 2012

ಕನಸು!!!

ದಿನೇ ದಿನೇ ಚಂದ್ರನು ಕ್ಷೀಣ್ಹಿಸುವಂತೆ, ಮರೆಯಾಗುತ್ತಿದೆ ನನ್ನ ಕನಸು,
ಬಯಕೆ ಎಂಬ ಕಾಡಿನಲ್ಲಿ ಹಾದಿ ತಪ್ಪಿ,
ಎತ್ತ ಹೋಗುವುದೆಂದು ತಿಳಿಯದೆ ಪರಿತಪಿಸುತ್ತಿದೆ ನನ್ನ ಕನಸು,
ಆಸೆ ಎಂಬ ಸಮುದ್ರವ ತಲುಪಿ,
ದಡ ಕಾಣದೆ ಚಡಪಡಿಸುತ್ತಿದೆ ನನ್ನ ಕನಸು,
ಭವಿಷ್ಯ ವೆಂಬ ಸೂರ್ಯನೆದುರು ನಿಂದು,
ಬೆಳಕ ಕಾಣದೆ ಹುಡುಕಾಡುತ್ತಿದೆ ನನ್ನ ಕನಸು,
ಕಾತುರ ವೆಂಬ ಕಡಲಲ್ಲಿ ಕಾದಾಡಿ,
ನನಸಾಗುವ ಕರೆ ಕೇಳಲು ಹಂಬಲಿಸಿದೆ ನನ್ನ ಕನಸು,
ಕನಸ ತುಡಿತವ ನೋಡಲಾರದೆ, ಈ ಕನಸ್ಸು ನನಸಾಗುವುದೇ?
ಎಂದು ಕೇಳಲಾರಂಭಿಸಿದೆ ನನ್ನ ಈ ಪುಟ್ಟ ಮನಸು!

---- ಗ್ರೀಷ್ಮ ಪನ್ನೂರ್
ನೀ ಹೊರಟು ಹೋದ ಮೇಲೆ...

ನೀ ಹೊರಟು ಹೋದ ಮೇಲೆ...
ಇನ್ನೇನು...
ಪ್ರತೀ ಕ್ಷಣ ಪ್ರಶ್ನರ್ತಕವೇ...
ಪ್ರತೀ ಕ್ಷಣ ಸುಳ್ಳಿನ ಕಂತೆಯೇ..
ಪ್ರತೀ ಕ್ಷಣ ಏಕಾಂಗಿಯೇ..
ಪ್ರತೀ ಕ್ಷಣ ನಿನ್ನ  ನೆನಪೇ...
ಪ್ರತೀ ಕ್ಷಣ ನನಗೆ ಒಂದು ಸಾವೇ..
ಪ್ರತೀ ಕ್ಷಣ ನನಗೆ ನಾ ದೂರವೇ...
ಪ್ರತೀ ಕ್ಷಣ ನೀ ನನಗೆ ದೂರವಾಗುವ ಬದಲು...
ಪ್ರತೀ ಕ್ಷಣ ನನ್ನ ನನ್ನಲ್ಲೇ ಕೊಂದೆ..
ಅದಕ್ಕೆ...
ಈ  ಪ್ರತೀ ಕ್ಷಣದಿಂದ ನೀ ನನಗೆ ಶೂನ್ಯವಾಗಿರುವೆ..

- ಚೈತನ್ಯ ಮಂದಾಲ.