ಬುಧವಾರ, ಜನವರಿ 11, 2012

ಅರಳಿದ ಹೂವಿಗೆ


ಯಾರು ದಿಕ್ಕು ?
ಮೊಗ್ಗು ಹೂವಾದ,
ಬಾಡಿ ಬಯಲಿಗೆ
ಬಿದ್ದ ಕ್ಷಣಗಳ ಕಂಡವರೆಷ್ಟು?

ಮುಂಜಾವಿನಲ್ಲಿ ಚುಂಬಿಸಿದ
ಕಿರಣಗಳು,
ಹೊತ್ತೇರುವ ಮುನ್ನ ಮುದ್ದಿಸಿದ
ದುಂಬಿಗಳ,
ಮರೆತು

ತಾ ಸಾಕ್ಷಿಯಾಗಬೇಕಿದೆ
ಯಾರದೋ ಪ್ರೀತಿಗೆ,
ಮೂಡಿಯೇರಬೇಕಿದೆ
ಇನ್ನ್ಯಾರದೋ ಸಿಂಗಾರಕ್ಕೆ

ಹಾರದಿ ಬಂದಿಯಾಗಿ
ಹಂಚಿಕೊಳ್ಳಬೇಕಿದೆ
ನಕ್ಕವರ ನಗು,
ಅತ್ತವರ ಅಳು

ತನ್ನ ಕೀಳುವ ಕೈಗಳಿಗೆ
ಹಿಂಸಿಸದೆ,ಹೆಸರ ಕೇಳದೆ
ಇನ್ನಷ್ಟು ಹತ್ತಿರವಾಗಿ
ಹಾರೈಸುವ ಹೂವೆ

ನೀ ಕಾಲನಾಜ್ಞೆಗೆ
ಬಾಗಿ ಬಸವಳಿದು
ಕುಸಿದು ಬಿಳುವಾಗ
ನಿನ್ನ್ಯಾರು ಕೇಳಿದರೆ??
ಮುಸ್ಸಂಜೆಯಲಿ ಮರೆಯಾದ ಕಿರಣಗಳೇ ?
ಮರಳಿ ,ಬಂದ ಹಾದಿ ಹಿಡಿದ ದುಂಬಿಗಳೇ?
ಪ್ರೀತಿಗಾಗಿ ಮುತ್ತಿಟ್ಟವರೆ ?
ಸಿಂಗಾರಕ್ಕಾಗಿ ಮೈದಡವಿದವರೆ?
ನಿನ್ನ ಬಂದಿಸಿ ಬಳಸಿಕೊಂಡವರೆ ?
ಹೇಳೇ????

-ಚೈತನ್ಯ ಮಂದಾಲ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ