ಬುಧವಾರ, ಜನವರಿ 11, 2012

ಎಲ್ಲಿರುವೆ ...


ನನ್ನ  ಮನಸಿನ  ಮಾತು ...
ಕೇಳುವ ಮನಸೇ ನೀ ಎಲ್ಲಿರುವೆ?
ಬೇಗ ನೀ  ಬಳಿ  ಬರಬಾರದೇ...
ನಿನಗಾಗಿಯೇ ನಾ ಕಾದು  ಕುಳಿತಿರುವೇನು ....
ನಮ್ಮ  ಭಾವನೆಗಳ  ಬಾಂಧವ್ಯದ
ಬೆಸುಗೆಗೆ  ಈ  ಮನಸು..
ನಿನ್ನನ್ನೇ  ಅರಸುತಿದೆ ನನ್ನ ಈ ಮನ ..
ಎದುರಿದ್ದರು  ಅಡಗಿರುವಂತಿದೆ,
ಬಳಿ  ಬಂದು , ಕೈ  ಹಿಡಿದು ,
ಬೆಚ್ಚಗಿನ ನಿನ್ನ  ಎದೆಗೊರಗಿಸಿಕೋ ಎಂದು ...
ತಡವರಿಸುತಿದೆ ನನ್ನ ಈ ಮನ ...
ಮನದ  ಮಾತು  ಬಿಚ್ಚಿಡಳು ನಿನಗಾಗಿ..
ಹೂ  ದುಂಬಿಯಂತೆ ಕಾದಿರುವೆ ..
ಭಾವನೆಗಳ ದೀಪದ  ಬತ್ತಿ ..
ನನ್ನ ಮನಸೆಂಬ ಹೂ ಬಾಡುವ ಮುನ್ನ ....
ನನ್ನ  ಕಣ್ಣೆದುರು ನೀ ಬರಬಾರದೆ...

-ರಂಜು ಶ್ರೀ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ