ಬುಧವಾರ, ಮಾರ್ಚ್ 14, 2012

" ನೀನೇ ನನ್ನ 'ಜೀವ-ಜೀವನ' "

""ನೀನೇ ನನ್ನ ಬಾಳ ಸಖಿ,
ನಾನು ತಾನೇ ನಿನ್ನಯ ಸಖ,
ಕಂಡೊಡನೆ ಇಂದು ನಿನ್ನ ಮುಖ,
ಕನಸಲಿ ಕಂಡೆ ನಾನೆಲ್ಲಾ ಸುಖ.

ಓ., ಸಖಿ.., ಹೋಗದಿರು ಅಲ್ಲೇ ನಿಲ್ಲು,
ಹೋಗಬೇಕೆಂದಾದರೆ ಹೋಗೋ ಮುನ್ನ ಕೊಲ್ಲು,
ನೀನಿದ್ದರೆ ಸ್ವರ್ಗ ಕಾಣುವೆ ಇಲ್ಲೂ.,
ನೀ ಬಂದು ಸೇರು, ಪ್ರೀತ್ಸೋಣ ಎಲ್ಲೆಲ್ಲೂ..

ಓ.., ಜೀವಾ ಅಂಜದಿರು ನೀನಿನ್ನು,
ನಿನಗಾಗಿಯೇ ಇರುವೆ ನಾನಿನ್ನು,
ಕಳಕೊಳ್ಳದಿರು ನೀ ನಿನ್ನನ್ನು,
ಚಿಂತೆ ಮರೆತು ಬಾ ಅಪ್ಪಿಕೋ ನಿನ್ನನ್ನು."

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ