ಸೋಮವಾರ, ಮಾರ್ಚ್ 12, 2012

" ಕಾಲೇಜು ಜೀವನ "




ಮಗಾ, ಎಷ್ಟು ಬೇಗ ಕೊನೆಯ ವರ್ಷ ಮುಗಿತು, ನಾಲ್ಕು ವರ್ಷ ಕಳೆದದ್ದೇ ಗೊತ್ತಾಗಲಿಲ್ಲ.... ಇವು ವಿದ್ಯಾಥಿ೯ ಜೀವನದ ಕೊನೆಯ ದಿನಗಳಲ್ಲಿ ಹೇಳುವ ಮಾತುಗಳು.
ಸಂಜೆ ನಾಲ್ಕು ಆಯಿತು, ಕಾಲೇಜುನಿಂದ ಹೊರ ಹೊಗಲು ಮನಸಿಲ್ಲ. ಐದಾದರು ಮನಸ್ಸು ಹಾತೊರೆಯುತಿಲ್ಲ . ಪ್ರತಿದಿನ  ನಾಲಕ್ಕು ಆಯಿತು ಅದರೆ ಸಾಕು ಹೊರಹೊಗಲು ಬಯಸುತ್ತಿದ್ದ ಯುವ ಮನಗಳು  ಇಂದು ಇಷ್ಟು  ಬೇಗ ಯಾಕಪ್ಪಾ ನಾಲಕ್ಕು ಆಯಿತು ಎನ್ನುತ್ತಿವೆ.  ಈಗ ಮತ್ತೊ೦ದು  ದಿನ ಬೇಕು ಎಂದು ಹೇಳುತ್ತಿವೆ. ಮುನಿಸಿ ಕೊ೦ಡ ಮನಗಳ ಜೊತೆ ಈಗ ಆತ್ಮಿಯ ಮಾತುಗಳು  ನಡೇಯುತ್ತಿವೆ. ಪ್ರಿತಿ ವ್ಯಕ್ತ ಪಡಿಸದೆ ಇದ್ದ ಮನಗಲಿಗೆ  ಪ್ರಿತಿ ವ್ಯಕ್ತ ಪಡಿಸಬೆಕು ಬಯಸುತ್ತಿವೆ ಪ್ರಿತಿತುಂಬಿದ ಮನಗಳೇ ಜಾಸ್ತಿ, ದ್ವೇಷ ಮನಗಳಿಲ್ಲ. ಇವೇ ಕಾಲೆಜು ರಂಗದ ಕೊನೆಯ ದಿನಗಳ  ಕೊನೆಯ ಕ್ಷಣಗಳು. 

                                                         ******
ಮೊದಲ ವರ್ಷ, ಎಲ್ಲರೂ ಅಪರಿಚಿತರೇ, ಪಿಯುಸಿ ಮುಗಿಸಿ ಬಂದ ಈ ಯುವ ಮನಗಳಿಗೆ ಕಾಲೇಜು ಅಂದರೆ ಒಂಥರಾ ಮೋಜು, ಜೀವನದಲ್ಲಾದರು ಮೋಜು-ಮಸ್ತಿ ಮಾಡೋಣವೆಂದ ಅದೆಷ್ಟೋ ಮನಗಳು. ಯುವ ಹಕ್ಕಿಗಳಾಗಿ ಹಾರಾಡುವ ಸಮಯದಲ್ಲಿ, ಜೀವನದಲ್ಲಿ ಯಶಸ್ಸು ಸಾದಿಸಬೇಕು, ಎಂಬ ಕಲ್ಪನೆಯಿಂದ ಕಾಲೇಜು ಮೆಟ್ಟಿಲು ಏರಿದ ಕ್ಷಣಗಳು. ಅಬ್ಬಾ, ಎಷ್ಟು ದೊಡ್ಡ ಕಾಲೇಜು ! ಮೊದಲ ವರ್ಷ ಎಲ್ಲರಿಗೂ ಒಂದೇ ತರದ ಮನಸ್ಸು ಎಲ್ಲರಿಗೂ ಒಂದೇ ತರದ ಭಾವನೆ ಹೊಸ ಕಾಲೇಜು , ಹೊಸ ಹಾಸ್ಟೆಲ್, ಹೊಸ ವಿಷಯಗಳು, ಹೊಸ ಪ್ರಾದ್ಯಾಪಕರು, ಒಟ್ಟಿನಲ್ಲಿ ಎಲ್ಲವೂ ಹೊಸದು. ನಾನು ಎಂಬ ಮಾತು ಮಾತ್ರ ಹಳೇಯದು. ಮೊದಲ ದಿನ ಏನೊ ಹುರುಪು ಯುದ್ದ ಗೆಲ್ಲಲು ಹೊರಟ ಸಿಪಾಯಿಗಳಂತೆ, ಇವರಿಗೆ ಸ್ವಲ್ಪ ಖುಷಿ, ಬರವಸೆ ಉತ್ಸಹ , ಧೈರ್ಯ. ಹೊಸ ಸ್ನೆಹಿತರ ಪರಿಚಯ ಹಳೇ ಸ್ನೆಹಿತರ ನೆನಪು ಹೊಸ ಸ್ನೆಹಿತರಲ್ಲಿ ಹಳೇ ಸ್ನೆಹಿತರ ಹೊಲಿಕೆ... ಮೊದಲ ವರ್ಷ ಒಂದೊಂದು ವಿಷಯ ಚೂರು ಚೂರಾಗಿ ಓದಿ ಸುಧಾರಿಸಿಕೊವುದರಲ್ಲಿ ಪರಿಕ್ಷೆಯೆ ಬಂತಲ್ಲ !
ಜೊತೆಗೆ ಮೊದಲ ವಷ೯ದ ಮತ್ತೊಂದು ಮುಖ ಸೀನಿಯರ್ಸ್, ರಾಗಿಂಗ್ ?! ಇವರು ಮೊದಲ ವಷ೯ದ ವಿದ್ಯಾಥಿ೯ಳಿಗೆ ಖಳನಾಯಕರು-ಖಳನಾಯಕಿಯರು, ಕಿರಿಯ ವಿದ್ಯಾಥಿ೯ಗಳಿಗೆ ಇವರನ್ನು ಎದುರಿಸಲು ಧೈರ್ಯವಿಲ್ಲ , ಸುಮ್ಮನೆ ಇರಲು ಮನಸ್ಸಿಲ್ಲ ಸೀನಿಯರ್ಸ್ ಹೇಳಿದ ರೀತಿಯಲ್ಲೆ ನಡೆಯಬೇಕು , ದಾರಿ ತಪ್ಪಿದರೆ ದಂಡ ತೆರಬೇಕಾಗುತ್ತದೆ. ಹೊಗುತ್ತಿರುವುದು ತಪ್ಪು ದಾರಿ ಅಂತ ಗೊತ್ತಿದ್ದರು ಮನಸಿನ ಮಾತು ಕೆಳುವಂತಿಲ್ಲ. ಜೊತೆಗೆ ಕಿರಿಯ ವಿದ್ಯಾಥಿ೯ ನಾವೆಲ್ಲಾ ಒಂದೇ ಬಾವನೆ ಬರುವಷ್ಟರಲ್ಲಿ ಮೊದಲ ವರ್ಷ ಮುಗಿಯುತ್ತಿರುತ್ತದೆ.
                                                         ******
ಈಗ ನಾವು  ಸೀನಿಯರ್ಸ್ ಆದೆವು ಎಂಬ ಗತ್ತು ಬೇರೆ ಬಂದಿರುತ್ತದೆ. ಕೆಲವರು ಗೆದ್ದ ಖುಷಿಯಿಂದ, ಇನ್ನು ಕೆಲವರು ಸೊತ ನಿರಾಶಯಿಂದ ಮುಂದಿನ ಹೆಜ್ಜೆ ಹಾಕಿರುತ್ತಾರೆ. ಈಗ  ಹಿಂದಿನ ವರ್ಷ ದ ಎಲ್ಲ ನೊವಿಗೂ ಉತ್ತರ ಕೊಡಬೇಕಾದ ಸಮಯ, ಆದರೆ ಇಲ್ಲಿ ಮತ್ತೋಂದು ಕಿರಿಯ ವಿದ್ಯಾಥಿ೯ ಸೈನ್ಯ ಬಂದಿರುತ್ತದೆ. ಈಗ ಇವರ ಸರದಿ, ಕಾಲೇಜು ಈಗಲೇ ಚಿರಪರಿಚಿತ, ಎಲ್ಲೊ ಓದಬೇಕು ಅಂತ ಮನಸ್ಸು ಹೇಳುತ್ತಿರುತ್ತದೆ ಆದರೆ ತಾತ್ಸರ. ಈ ವರ್ಷ ಇವರಿಗೆ ಮೀಸಲು ಎಲ್ಲಾ ರೀತಿಯಲ್ಲು ಇವರದ್ದೇ.
 
ಇವರದ್ದು ಒಂಥರ ಜೀವನ, ಏನ್ಮಾಡೊಣ ಹೇಳಿ ನಮ್ಮ ಹುಡುಗರಿಗೆ ಈಗ ಓದಲು ಸಮಯನೇ ಇಲ್ಲ... ದಿನಕ್ಕೆ ಬರೀ ಇಪ್ಪತ್ತನಾಲ್ಕು ಗಂಟೆ ವಾರಕ್ಕೆ ಏಳೇ ದಿನಗಳು.. ಆದರೂ ಸಾಕಾಗುತ್ತಿಲ್ಲ. ಈಗ ಏಳು ಗಂಟೆಗೆ ಏದ್ದರೆ ಓಂಥರ ಅವಮಾನ, ಲೆಚ್ಚರ್ ಬರುವ ಮೊದಲೇ ಕ್ಲಾಸ್ ನಲ್ಲಿ ಕೂರುವುದು ಅಪಮಾನ. ಐದು ನಿಮಿಷ ತಡವಾದರೂ, ಅಡ್ಡಿ ಇಲ್ಲ. ಹೆಸರಿಗಷ್ಟೆ ಪ್ರಾಟಿಕಲ್, ಕ್ಲಾಸ್ ನಲ್ಲಿ ಕಣ್ ತುಂಬಾ ಬರೀ ಕನಸು. ನಾಲ್ಕು ಗಂಟೆಗೆ ಜೈಲಿನಿಂದ ಬಿಡುಗಡೆ. ಕೆಲ ಸಮಯ ಆಡಲಿಕ್ಕೆ, ಸಂಜೆ ಡಾಬ- ಕ್ಯ್ಂಟೀನ್ ನಲ್ಲಿ ಬರೀ ಬಜ್ಜಿ, ಬೊಂಡ, ಗೊಬಿ, ಆಮ್ಲೆಟ್, ನೂಡಲ್ಸ್ ಮತ್ತು ಏಂಟು ಗಂಟೆಗೆ ಊಟ. ಆ ಮೇಲೆ ಹಾಲಿವುಡ್ ಸಿನಿಮಾ, ಹುಡುಗಿಯರ ಜೊತೆ ಫೊನ್ ನಲ್ಲಿ ಮಾತು, ಇನ್ನು ಕೆಲವರು ಬರೀ ಮೆಸೇಜು... ಮತ್ತೆ ಸ್ನೆಹಿತರ ರೂಮ್ ನಲ್ಲಿ ಹರಟೆ. ಅವ-ಇವರ ಬಗ್ಗೆ ಮಾತು-ಕತೆ.
ದಿನವಿಡೀ ಬಳಲಿ ,ಹಾಸಿಗೆ ನೊಡುವಷ್ಟರಲ್ಲಿ ನಿದ್ದೆ. ಈಗ ಇವರ ಅನುಭವನೇ ಬೇರೆ... ಮಾಡುವುದೇ ಬೇರೆ... ಜಾಲಿಯಾಗಿರೊಣವೆಂದರೆ ಬಿಡದ ಟೆಸ್ಟ್ ಗಳು ಅಸೈನ್ ಮೆಂಟ್ ಗಳು, ಕನಿಷ್ಟ ಮಾಕು೯ಗಳಾದರೂ ಪಡಯಲೇಬೇಕಾದ ಅನಿವಾಯ೯ತೆ ಏಕಂದರೇ ಕನಿಷ್ಟ ಮಾಕು೯ ಇಲ್ಲ ನಪಾಸು ಎಂಬ ಹಣೆಪಟ್ಟಿ ಯಾಕೆ. ಅಂತೂ ಇಂತೂ ಪಾಸಾದರೆ ಹಾಜರತಿ ಕಡಿಮೆ ಇರುವವರ ಪಟ್ಟಿ!
                                                      ******
ನೊಡು-ನೋಡು ತಿದ್ದ ಹಾಗೆ ಎರಡನೇ ವರ್ಷ ಪಾಸು,  ಇವರಿಗೆ ಯುದ್ದ ಗೆದ್ದ ಸಂಭ್ರಮ. ಕಾಲೇಜುನ ಹಿರಿಯ ವಿದ್ಯಾಥಿ೯ಗಳು ಎಂಬ ಪಟ್ಟ ಬೇರೆ. ಕಾಲೇಜಿಗೆ ಇವರೆ ರೋಲ್ ಮಾಡೆಲ್ಸ್ ಆದ್ರೆ ಏನು ಮಾಡೋದು ಫೇಲಾದ ಕೆಲ ವಿಷಯಗಳು. ಮನಸ್ಸಿನಲ್ಲಿ ಈಗ ಪ್ರೀತಿ-ಪ್ರೇಮ ಮೂಡುವ ಸಮಯ. ಅಷ್ಟರಲ್ಲಿ ಯಾರೊ ಇನ್ನೊಬ್ಬ ಅದೇ ಹುಡುಗಿಯನ್ನು ಪ್ರೀತಿಸುತ್ತಾ ಇದ್ದಾನೆ ಏಂದು ತಿಳಿದು ಅವನ ಮೇಲೆ ವೈಮನಸ್ಸು, ಇರುಸು-ಮುರುಸುಗಳು.ಹೊಡದಾಟ ದೂರುಗಳು. ರೋಲ್ ಮಾಡಲ್ಸ್ ಅಗ್ಬೇಕಿರುವವರೇ ಮಾನ ಇಲ್ಲದ ಹಾಗೆ ನಡಿತೀರ ಅನ್ನೋ ಮಾತು ಬೇರೆ.
ಜೊತೆಗೆ ಮನಸ್ಸಿನಲ್ಲಿ ಏನಾದರು ಮಾಡಬೇಕು ಎಂಬ ಆಸೆ ಹಂಬಲ. ಒದಬೇಕು ನಾನು ಏನು ಎಂಬುದು ಎಲ್ಲರಿಗೂ ತೊರಿಸಬೇಕು ಎಂಬ ಭಾವನೆ.
ತಡ ರಾತ್ರಿಗಳ ವೇಳಾ ಪಟ್ಟಿ ತಯಾರು. ಆದರೆ ಅತೀ ಕೆಲಸದ ಓತ್ತಡ.
                                                       *****
ಅಂತಿಮ ವರ್ಷ ಸಡಗರವೊ ಸಡಗರ. ಆಗಂತೂ ಎಲ್ಲವೂ ಅಮೂಲ್ಯ ಕ್ಷಣಗಳು, ಕೆಲವರಿಗೆ  ಎಷ್ಟು ಬೇಗ ಕೊನೆಯ ವರ್ಷ ಮುಗಿತು, ಇನ್ನು ಕೆಲವರು ಯಾವಗ ಇಲ್ಲಿಂದ ಹೊಗೊದು... ಕೆಲವರಿಗೆ ಇಲ್ಲಿ ನಾನು ಏನು ಕಲಿತೆ ಎಂಬ ಯೊಚನೆ,ಮತ್ತೆ ಕೆಲವರಿಗೆ ಈ ವರ್ಷ ಆದರೂ ಪ್ರೀತಿ ಹೇಳಬೇಕು ಎಂಬ ಬಯಕೆ, ಬಿಟ್ಟು ಹೊದ ಹುಡುಗಿ ಚೆನ್ನಾಗಿರಲಿ ಹಾರೈಕೆ... ಈಗ ಎಲ್ಲರೂ ಚಿರಪರಿಚಿತರು ಇನ್ನು ಕೆಲವರು ಆತ್ಮೀಯರು
ವಿದಾಯದ ದಿನ ಕಣ್ಣಂಚಿನಲಿ ನೀರು, ಮನಸ್ಸು ತುಂಬಾ ಬಾರ ಬಿಡಲು  ಬಾರದೇ ಇರುವ ಮನಸ್ಸು ಆದರೆ ಬಿಡಲೇಬೇಕಾದ ಪರಿಸ್ಥಿತಿ..
ಕಲ್ಲು ಮುಲ್ಲು ಒಂದೊಂದು ಕಥೆ ಹೇಳುತ್ತಿವೆ ಗಿಡಮರಗಳಲ್ಲೂ ನೆನಪುಗಳು ಪ್ರಾಣ ವಿಲ್ಲದ ಕಟ್ಟಡ ಕಂಡರೂ ನೋವು, ಕೊನೆಯ ದಿನ ಬೇಗ ಮುಗಿಯುವ ಕಾಲುದಾರಿ ನಡಿಗೆಗಳು, ಪ್ರಾದ್ಯಪಕರಿಂದ ಆಶಿ೯ವಾದಗಳು, ಡಾಬಾ ಕ್ಯಾಂಟಿನ್ ಕಡೆ ಆಗಳಿಕೆಯ ನೋಟಗಳು..,
 
ನಮಗೆ ನಮ್ಮ ಕಾಲೇಜು ಏನು ಕಳಿಸಿ ಕೊಟ್ಟಿದೆ ಅಂತ ಯಾರನ್ನಾದರೂ ಕೇಳಿದರೆ ಲೈಫ್ ಬಗ್ಗೆ ತಿಳಿಸಿಕೊಟ್ಟಿದೆ ಅನ್ನುವರೆ ಜಾಸ್ತಿ. ಕಾಲೇಜ್ ನಲ್ಲಿ ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಅಂತ ಡಿಸೈಡ್ ಮಾಡೋದು , ಫ್ರೆಂಡ್ ಶಿಪ್ ನ ಬೆಲೆ , ಲವ್ ನ ವ್ಯಾಲು,  ನೋವು ನಲಿವು ಹಂಚಿಕೊಳ್ಳೋದು ನಾಯಕತ್ವ , ಟೀಂವರ್ಕ್,  ರೇಗಿಸೋದು, ಒಂದೇ-ಎರಡೇ..     
ಮತ್ತೆ ಒಂದುದಿನ ತಮ್ಮ ವಿದ್ಯಾಥಿ೯ ಜೀವನ ತಿರುಗಿ ನೊಡಿದರೆ, ಕ್ಲಾಸ್ ನಲ್ಲಿ ಮಾಡಿದ ಗಲಾಟೆಗಳು, ಮೆಸೇಜ್ ಗಳು , ಲವ್ ಸ್ಟೊರಿಗಳು, ಗಲಾಟೆಗಳು, ಡಾಬಾಗಳು, ಕ್ಯಾಂಪಸ್ ನ ಕಟ್ಟೆಗಳು, ಬಸ್ ನ ಪ್ರಾಯಣ ಗಳು, ಹೂ ಗಿಡಗಳು, ಕನಸುಗಳು, ಬಯಕೆಗಳು, ಕೊನೆಗೆ ಪರೀಕ್ಷಾ ಹಿಂದಿನ ರಾತ್ರಿಯ ಕಸರತ್ತುಗಳು...
ಇವೇ ಕಾಲೇಜು - ವಿದ್ಯಾಥಿ೯ ಜೀವನದ  ಮರಲಿ ಬಾರದ ಮರೆಯಲಾಗದ ನೆನಪುಗಳು...
- ಚೈತನ್ಯ ಮಂದಾಲ
ಕೃಷಿ ಮಹಾವಿದ್ಯಾಲಯ, ಹಾಸನ

1 ಕಾಮೆಂಟ್‌: