ಬುಧವಾರ, ಫೆಬ್ರವರಿ 15, 2012

ನನ್ನಾಕೆ..

ಕಪ್ಪು ಕಾಡಿಗೆಯ ನಿಟ್ಟು
ಕೆಂಪು ಸೀರೆಯ ತೊಟ್ಟು
ಬಣ್ಣವನ್ನೆಲ್ಲ ಮೆತ್ತಿಕೊಂಡಾಳೊ
ಮೆಲ್ಲಗೆ ಹೆಜ್ಜೆಯನಿಟ್ಟು ಬಂದು
ಮುತ್ತಿಟ್ಟ ಹಾಂಗ ನಕ್ಕಾಳೊ

ಹಣೆಯಮ್ಯಾಲ ಬಿಂದಿಯ ನಿಟ್ಟು
ಕೈಯಾಗ ಬಣ್ಣದ ಬಳೆಗಳ ತೊಟ್ಟಾಳೊ
ಕೊರಳಾಗ ಗೊರಮಾಳವ ಹಾಕಿ
ಗಮ್ಮೆಂದ ಮಲ್ಲಿಗೆ ಮುಡಿದಾಳೊ
ದೇವತಿಯಾ ಹಾಂಗ ನಕ್ಕಾಳೊ

ಮುಟ್ಟಿದರ ಮಾಸುವಳು
ಕರೆದರ ಕರಗುವಳು
ನೋಡಿದರ ನಾಚುವಳು
ಮಿಂಚಂತೆ ಹೊಳದಾಳೊ
ಚಂದ್ರನ ತಂಗಿ ದೂರ ನಿಂತು ನಕ್ಕಾಳೊ

ಮನದಾಗ ಮನಿಮಾಡಿ
ಕಣ್ಣೋಳಗ ಕನಸಾಗಿ
ಉಸಿರಿಗೆ ಉಸಿರಾಗಿ ಬಂದಾಳೊ
ಎದಿಯಾಗ ಬೆಳಕಾಗಿ ನಿಂತಾಳೊ
ಎದುರಿಗೆ ನಿಂತು ನಕ್ಕಾಳೊ

ಎನ್ ಹೇಳಲಿ ನಾನೀಗ
ಮೂಕಾದೆ ಅವಳ್ನ ಕಂಡು
ಮಾತಲ್ಲಿ ಮೈ ಮರಸ್ಯಾಳೊ
ಜೋತಿಯಾಗಿ ಬಾಳಕ ಬಂದಾಳೊ
ಹೂವಂತ ನಗೆಯ ಚೆಲ್ಲಿ ಕೈ ಹಿಡಿದಾಳೊ...

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ