ಹಣ ಅಂದರೆ ಯಾರಿಗೆ ಬೇಡ. ಹಣ ಅಂದರೆ ಹೆಣನೂ ಬಾಯಿ ಬಿಡುತ್ತಂತೆ ಅದಕ್ಕೆ ಹೇಳೊದು "ದುಡ್ಡಿದ್ರೆ ದುನಿಯ", "ದುಡ್ಡೇ ದೊಡ್ಡಪ್ಪ" ಅಂತ. "ದುಡ್ಡು ಕೊಟ್ಟರೆ ಬೇಕಾದು ಸಿಗುತೈತಿ ಈ ಜಗದಾಗೆ ಕಾಣೊ...." ಅಂತ ಎಲ್ಲೊ ಕೇಳಿದ ನೆನಪು. ಆದರೆ ಪ್ರೀತಿ ಸಿಗುತ್ತಾ, ಅಂತ ಮಾತ್ರ ನನಗೆ ಗೊತ್ತಿಲ್ಲ. ದುಡ್ಡು ಇದ್ದರೆ ಪ್ರೀತಿನು ಬರುತ್ತೆ ಅದರ ಅಪ್ಪನು ಬರುತ್ತೆ ಅಂತರೆ ದುಡ್ಡು ಇರುವವರು. ಪ್ರೀತಿ ಒಂದು ಇದ್ದರೆ ಸಾಕು ಎನೂ ಬೇಡ ಅಂತರೆ ಇನ್ನು ಕೆಲವರು. ಹೊಗಲಿ ಬಿಡಿ ದುಡ್ಡು ಹೆಚ್ಚಾ ಅಥವಾ ಪ್ರೀತಿ ಹೆಚ್ಚಾ ಅಂತ ಆಮೇಲೆ ಯೋಚನೆ ಮಾಡೋಣ.
ಮೊನ್ನೆ ಸ್ವಲ್ಪ ಕೆಲಸ ಇದ್ದು ಬ್ಯಾಂಕ್ ಗೆ ಹೊಗಿದ್ದೆ, ನೂರ್ಗೆ ಚೇಂಜ್ ಬೇಕಿತ್ತು, ಹಾಗಾಗಿ ಗಮಗಮ ಅನ್ನೊ ಹೊಸ ಹತ್ತು, ೧೦ರ ನೋಟುಗಳು ನನ್ನ ಕಿಸೆ ಸೇರಿದವು. ಅವತ್ತು ನನ್ನ ಸ್ನೇಹಿತನೊಬ್ಬ ನನ್ನಿಂದ ಆ ಹತ್ತರ ಐದು ನೋಟುಗಳನ್ನು ತೆಗೆದುಕೊಂಡ. ಮರುದಿನ ಬೇರೆ ಹತ್ತರ ನೋಟುಗಳನ್ನು ನನಗೆ ಕೊಟ್ಟ ಅವತ್ತು ಸಂಜೆ ನಮಗೆ ಸಿಟಿಗೆ ಹೋಗೊ ಕೆಲಸ ಇತ್ತು, ಆದರೆ ನನ್ನ ಆ ದೋಸ್ತು ಸಂಜೆ ರೆಡಿ ಆಗಿರಲಿಲ್ಲ ಬದಲಿಗೆ ತುಂಬಾ ಸೀರಿಯಸ್ ಆಗಿ ಏನನ್ನೋ ಹುಡುಕುತ್ತಿದ ಎನಾಗಿದೆ ಅಂತ ವಿಚರಿಸಿದಕ್ಕೆ ಅವ ಹತ್ತು ರೂಪಾಯಿ ಮಿಸ್ಸು ಅಗಿದೆ ಅದು ನನಗೆ ಪ್ರಾಣಕಿಂತಲೂ ಹೆಚ್ಚು ಅಂತ ಉತ್ತರ ಕೊಟ್ಟ. ಏನಪ್ಪ ಅಂತ ಸ್ಪೆಷಲ್ ಆ ನೋಟಿಗೆ ಅಂತ ಕೇಳಿದ್ದಕ್ಕೆ.....
"ಅದು ಏಂಟು ವರ್ಷದ ಕೆಳಗೆ ನಾನು ಒಂದುಸಲ ಕಾಲೇಜಿನಿಂದ ಮನೆಗೆ ಹೊಗುತ್ತಿದ್ದೆ ಒಂದು ಸುಂದರವಾದ ಹುಡುಗಿ ಬಸ್ ಸ್ಟಾಂಡ್ ನಲ್ಲಿ ಕಂಡೆ ಅದೆನೂ ಅಂತರಲ್ಲ "ಲವ್ ಅಟ್ ಫಸ್ಟ್ ಸೈಟ್ " ಅದಾಯಿತು ಎನು ಮಾಡಲಿ. ನನ್ನ ಲಕ್ನಿಂದ ಅವಳು ನನ್ನ ಪಕ್ಕದಲ್ಲೆ ಬಂದು ಕೂತಲು. ಆ ಕ್ಷಣ ನನ್ನ ಹೃದಯದ ಆಕಾಶಕ್ಕೆ ಎಲ್ಲೆ ಇರಲಿಲ್ಲ. ಅಷ್ಟರಲ್ಲಿ ನಿರ್ವಹಕ ಬಂದು ಟಿಕೇಟನ್ನು ತೆಗೆದುಕೊಳ್ಳಲು ಅವಳಿಗೆ ಕೇಳಿದ, ಅದಕ್ಕೆ ಅವಳು ೧೦೦ರ ನೊಟುನ್ನು ಕೊಟ್ಟರೆ, ಅವ ೭ರೂ ಚೇಂಜ್ ಕೊಡು ತಾಯಿ ಅಂದ. ಅವಳ ಹತ್ತಿರ ಚೇಂಜ್ ಇರಲಿಲ್ಲ. ಆಗ ನಾನು ೧೦ ರುಪಾಯಿ ಕೊಟ್ಟೆ. ಅವಳು ಬೇಡ ಅಂದಳು ನಾನು ಒತ್ತಯ ಮಾಡಿ ಕೊಟ್ಟೆ ನಂತರ ಅವಳ ಹೆಸರು ತಿಳಿದು ಕೊಂಡೆ.
ನೆಕ್ಟ್ ಡೇ, ಅದೇ ಬಸ್ಸು ,ಅದೇ ಸೀಟು ಮತ್ತೇ ಅದೇ ಹುಡುಗಿ !. ಇಗ ಅವಳು ೧೦ರೂ ನನಗೆ ವಾಪಸ್ಸು ಕೊಟ್ಟಳು. ಆಗ ನಾನು ಅದರ ಮೇಲೆ ಅವಳ ಹೆಸರು ಬರೆದು ಎತ್ತಿಟ್ಟುಕೊಂಡೆ ಅವಳು ಯಾಕೆ ನನ್ನ ಹೆಸರು ಬರೆದು ಕೊಂಡೆ ಅಂತ ಕೇಳಿದಕ್ಕೆ, ನಿಮ್ಮ ನೆನಪಿಗೆ ರೀ ಅಂದೆ. ಅದಕ್ಕೆ ಅವಳು ನನ್ನ ನೆನಪು ಯಕ್ರಿ ನಿಮಗೆ ಅಂತ ಕೇಳಿದ್ದಕ್ಕೆ ಮುಂದೆ ಬೇಕು ಬಿಡ್ರಿ ಅಂದೆ.
ಹಾಗೆ ೨-೩ ತಿಂಗಳು ನಮ್ಮ ದೋಸ್ತಿ ಮುಂದುವರೆಯಿತು. ಒಂದುದಿನ ನನ್ನ ಹತ್ತಿರ ಇದ್ದ ಆ ೧೦ ರೂ ನೋಟು ಕಾಣೆಯಾಗಿತ್ತು. ಒಂದು ಸಲ ಯಾಕೊ ಅವಳ ಪರ್ಸ್ ನನ್ನಲ್ಲಿ ಎನೊ ಹುಡುಕ ಬೇಕಾದರೆ ಆ ೧೦ರ ನೋಟು ಮತ್ತೆ ಕಾಣಿಸಿತು. ಯಾಕೆ ಈ ನೋಟು ನಿನ್ನ ಹತ್ತಿರ ಇದೆ ಅಂತ ಕೇಳಿದಕ್ಕೆ ನನಗೆ ಪ್ರಿಯವಾಗಿರೊವರು ಕೊಟ್ಟಿದ್ದು ಅಂದಳು. ಅವತ್ತು ಅವಳನ್ನು ಕೇಳಿ ತೆಗೆದು ಕೊಂಡಿರೊ ಆ ೧೦ರ ನೋಟು ಇವತ್ತು ಮತ್ತೆ ಮಿಸ್ಸ್ ಆಗಿದೆ ಹಾಗಾಗಿ ಇಸ್ಟು ಫಿಲಿಂಗ್ ಅಂದ". ನನಗೆ ಯಾಕೊ ಸಂಶಯ ಆಗಿ ನನ್ನ ಪರ್ಸ್ ನೊಡಿ ಕೊಂಡರೆ ಅದು ಅಲ್ಲಿ ಸುಮ್ಮನೆ ಕೂತಿತ್ತು.
-ಚೈತನ್ಯ ಮಂದಾಲ
.jpg)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ