ಭಾನುವಾರ, ಫೆಬ್ರವರಿ 12, 2012

ಕಳ್ಳನು ನಾನು

ಕಳ್ಳನು ನಾನು
ನೀವು ಹೇಳುವ ಕಳ್ಳನು ನಾನು

ಕದಿಯುವೆ
ಹೊಟ್ಟೆಪಾಡಿಗೆ
ಒಳಗಾಗಿ
ಕಟ್ಟುಪಾಡಿಗೆ
ಕದೀಮನ
ಸುಲಿಯುವೆ
ಎಲ್ಲರ ಒಂದು
ಮಾಡುವೆ

ಕಳ್ಳನು ನಾನು
ನೀವು ಹೇಳುವ ಕಳ್ಳನು ನಾನು

ಕಳ್ಳನು ನೀವಿತ್ತ
ಬಿರುದುವು
ಕೂಡಿ ಕಳೆದು ಕೊಡುವ
ಕಳ್ಳರು ನೀವು
ಒಂದೇ ಜಾತಿಯ
ಕೊಂಡಿಯು ನಾನು
ಬೆಸೆಯುವೆ ನಿನ್ನನು
ನಿಮ್ಮವರ ಜೊತೆ

ಕಳ್ಳನು ನಾನು
ನೀವೇ ಹೇಳುವ ಕಳ್ಳನು ನಾನು

ಕಳ್ಳರು ಕೆಟ್ಟವರು
ನಿಮಗೆ
ಯಾಕೆ ದೂಡಬೇಕಿತ್ತು
ನಮಗೆ
ನಿಮ್ಮಂತೆ ಮನುಷ್ಯರು
ನಾವು
ನಿನ್ನಂತೆ ಯೋಚಿಸುವ
ಜೀವಿಯು ನಾನು
ಕಳ್ಳನು ನಾನು 

2 ಕಾಮೆಂಟ್‌ಗಳು:

  1. ಈಗಷ್ಟೇ ನಿನ್ನ ಬ್ಲಾಗನ್ನ ಪೂರ್ತಿ ಓದಿ ಮುಗಿಸಿದೆ. ಭಾವ, ಭಾಷೆ ಎರೆಡೂ ಚೆನ್ನಾಗಿದೆ.. ಹೀಗೇ ಬರೆಯುತ್ತಿರು. ನಿನಗೆ ಶುಭವಾಗಲಿ....
    ಪ್ರಸನ್ನ ಆಡುವಳ್ಳಿ, ಬಾಳೆಹೊನ್ನೂರು

    ಪ್ರತ್ಯುತ್ತರಅಳಿಸಿ
  2. ಇದೆಲ್ಲಾ,
    ನಿಮ್ಮ ಉತ್ತೇಜನ,
    ನಾ ಎಂದಿಗೋ ನಿಮಗೆ ಚಿರಋಣಿ..
    -ಚೈತನ್ಯ ಮಂದಾಲ

    ಪ್ರತ್ಯುತ್ತರಅಳಿಸಿ